Saturday, May 17, 2008

ಪ್ರೀತಿಯ ಋಜು

ಕರಿ ಮೋಡ ಕರಗಿ ನೀರಾಗಿ ಭುವಿಗೆ ತಂಪನೆರವಾಗ,
ಎನ್ನೆದೆಯ ಪ್ರೀತಿ ಗರಿಗೆದರಿ ಕಾಡಿತ್ತು ನಿನ್ನ ಮೋಡಿ !!

ಹುಚ್ಚು ಮನಸಿನ ಚಿಪ್ಪಿನೊಳಗೆ ಬಚ್ಚಿಟ್ಟು ನನ್ನೋಲವು,
ಕಾಡಿತ್ತು ಕಣ್ಣಾಲೆಯ ಅಂಚಿನಲ್ಲಿ ಕಣ್ಣೀರ ಹನಿಯಾಗಿ!!

ಹೃದಯಾಳದ ಗರ್ಭದೊಳಗೆ ವಿರಹದ ನಾಡಿಮೀಟಿ,
ಕಾಡುತ್ತಿತ್ತು ಒಲುಮೆಯಲ್ಲಿ ನೀನೋತ್ತಿದ ಪ್ರೀತಿಯ ಋಜು!!

Wednesday, March 5, 2008

ಜೋಗದ ಸಿರಿ

ಮುಂಜಾನೆ - ಸಂಜೆ

ಮುಂಜಾನೆ ಎದ್ದು ಖಾವಿ ತೊಟ್ಟು
ಕುಣಿದು ಹಾಡಿದ ಮೀರಾ - ಭಜನ್
ಸಂಜೆ ಖಾವಿ ಬಿಚ್ಚಿ ಎಲ್ಲ ಬಿಟ್ಟು
ತಿಂದು ತೇಗಿದ ತಂದುರಿ ಚಿಕನ್

Monday, February 25, 2008

ಮುತ್ತು - ಕುತ್ತು

ನಿನ್ನ ಪ್ರೀತಿಸಿದಾಗ
ಸಿಕ್ಕವು ಬರೀ ಮುತ್ತು
ಮಧುವೆಯಾದ ಮೇಲೆ
ಜೀವನಕ್ಕೆ ಬಂದಿದೆ ಕುತ್ತು

ಕವಿತೆ

ನನಗೆ ಕೈ ಕೊಟ್ಟು ಹೋದಳು
ನಾನು ಪ್ರೀತಿಸಿದ ಕವಿತೆ
ಆ ಕೊರಗಿನಲ್ಲೇ ಬರೆಯುತ್ತಿದ್ದೇನೆ
ಪುಟಗಟ್ಟಲೆ ಕನ್ನಡ ಕವಿತೆ

Sunday, February 24, 2008

ಖಾಲಿ ಹೃದಯ

ನನ್ನವಳು ನನಗೆ ಕೈ ಕೊಟ್ಟು ಹೋದರು
ನನ್ನ ಹೃದಯದ ಬಾಗಿಲು ಇನ್ನು ತೆರೆದೆ ಇದೆ
ಆದರು ಇನ್ನು ಯಾರು ಒಳ ಬರುತ್ತಿಲ್ಲ
ಏಕೆಂದರೆ ಆಕೆ ಬಿಟ್ಟ ಪಾದರಕ್ಷೆ ಇನ್ನು ಆಚೆ ಅಗೆ ಇವೆ

ಹನುಮಯಾಣ

ಹನುಮ ಲಂಕೆಗೆ ಬೆಂಕಿ ಇಟ್ಟ
ರಾವಣನನ್ನು ಮಾತ್ರ ಬಿಟ್ಟ
ಹನುಮನಿಂದ ಕೊಲ್ಲಲ್ಪಟ್ಟಿದ್ದರೆ ರಾವಣ
ರಾಮಾಯಣ ಆಗುತ್ತಿತ್ತು ಹನುಮಾಯಣ