Saturday, May 17, 2008

ಕಗ್ಗತ್ತಲೆಯ ಗೂಡಿನವರು ನಾವು!!

ಕಗ್ಗತ್ತಲೆಯ ಗೂಡಿನವರು ನಾವು,
ಸೂರ್ಯನಿದ್ದರು ಬೆಳಕ ಕಾಣದೆ,
ಕತ್ತಲೆಯ ಹಾದಿ ಇಡಿದವರು ನಾವು
ಕಗ್ಗತ್ತಲೆಯ ಗೂಡಿನವರು ನಾವು!!

ಇರುವ ಆರಡಿ ಮೂರಡಿ ಜಾಗದಲ್ಲೇ,
ಬಂಗಲೆಯ ಸವಿಗನಸ ಕಂಡು,
ನೋವಿನ ಛಾವಣಿ ಒದ್ದವರು ನಾವು,
ಕಗ್ಗತ್ತಲೆಯ ಗೂಡಿನವರು ನಾವು!!

ಅಶನ - ವ್ಯಶನ ಯಾವುದೇ ಇರಲಿ,
ಮದುವೆ - ಮುಂಜಿ ಏನೆ ಬರಲಿ,
ಇದ್ದಲ್ಲೆ ಮಮತೆಯ ನೂವುಂಡವರು ನಾವು,
ಕಗ್ಗತ್ತಲೆಯ ಗೂಡಿನವರು ನಾವು!!

ರೊಚ್ಚು ಕೆಸರೆ ಹರಿಯುತಿರಲಿ,
ಕೊಳೆತ ಮಾಂಸವೇ ನಾರುತಿರಲಿ,
ಇದ್ದಲ್ಲೆ ಮೃಷ್ಟಾನ್ನವ ಸವಿದವರು ನಾವು,
ಕಗ್ಗತ್ತಲೆಯ ಗೂಡಿನವರು ನಾವು!!

ಹೊಟ್ಟೆ ಬಟ್ಟೆಗೆ ಹಸಿವ ಕಟ್ಟಿ,
ಬಾಳ ಬಂಡಿಗೆ ಒಲವ ನೊಗವ ಕಟ್ಟಿ,
ಬಡತನದ ಹಾದಿಯಲ್ಲಿ ಸಾಗಿದವರು ನಾವು,
ಕಗ್ಗತ್ತಲೆಯ ಗೂಡಿನವರು ನಾವು!!

(ನಾನು ಜುಲೈ ೨೦೦೨ ರಲ್ಲಿ ಎಂ. ಎಸ್. ಡಬ್ಲ್ಯು ಮಾಡುವಾಗ
ಶೈಕ್ಷಣಿಕ ಅದ್ಯಯನಕ್ಕಾಗಿ ಬೆಂಗಳೂರಿನ ಒಂದು ಕೊಳಗೆರಿಗೆ ಬೇಟಿ
ಇಟ್ಟಾಗ ನನ್ನ ಕಣ್ಮುಂದೆ ಬಂದ ಒಂದು ರೋಮಾಂಚಕಾರಿ ಅನುಭೂತಿ)

ಪ್ರೀತಿಯ ಋಜು

ಕರಿ ಮೋಡ ಕರಗಿ ನೀರಾಗಿ ಭುವಿಗೆ ತಂಪನೆರವಾಗ,
ಎನ್ನೆದೆಯ ಪ್ರೀತಿ ಗರಿಗೆದರಿ ಕಾಡಿತ್ತು ನಿನ್ನ ಮೋಡಿ !!

ಹುಚ್ಚು ಮನಸಿನ ಚಿಪ್ಪಿನೊಳಗೆ ಬಚ್ಚಿಟ್ಟು ನನ್ನೋಲವು,
ಕಾಡಿತ್ತು ಕಣ್ಣಾಲೆಯ ಅಂಚಿನಲ್ಲಿ ಕಣ್ಣೀರ ಹನಿಯಾಗಿ!!

ಹೃದಯಾಳದ ಗರ್ಭದೊಳಗೆ ವಿರಹದ ನಾಡಿಮೀಟಿ,
ಕಾಡುತ್ತಿತ್ತು ಒಲುಮೆಯಲ್ಲಿ ನೀನೋತ್ತಿದ ಪ್ರೀತಿಯ ಋಜು!!