Wednesday, November 2, 2016

ಜೀವನ ರಂಗೋಲಿ

ರಂಗು ರಂಗಾದ 
ರಂಗೋಲಿಯ ನಡುವೆ
ಅಡಗಿ ಕುಳಿತ ಚುಕ್ಕಿಗಳ
ಮರೆಯಲಾದೀತೆ?

ಚುಕ್ಕಿ ಚುಕ್ಕಿಗಳ
ನಡುವೆ ಸೇರಿಸಿ ಎಳೆದ
ಸಂಬಂಧಗಳ ಗೆರೆಯನ್ನು
ಅಳೆಯಲಾದೀತೆ?

ನಾ-ನೀ ಬೇರೆಂದು
ಸಂಬಂದ ಅಳಸುವ ಮುನ್ನ
ಚುಕ್ಕಿ ಚುಕ್ಕಿಗಳ ಸಮ್ಮಿಲನವ
ನೋಡಿ ಕಲಿಯಬಾರದೇಕೆ?

ಸಂಬಂಧದ ಗೆರೆ
ಸ್ನೇಹ ಪ್ರೀತಿಯ ಬಣ್ಣವ
ಮೇಳೈಸಿದ ನಮ್ಮ ಜೀವನ
ರಂಗಾದ ರಂಗೋಲಿಯಲ್ಲವೆ?

Wednesday, August 31, 2016

ಎತ್ತರಕ್ಕೇರಿದವರ ಅಂತಃಕರಣ

ಒಂದು ದಿನ ಡಾ. ದ.ರಾ ಬೇಂದ್ರೆ ಹಾಗೂ ಸುರೇಶ ಕುಲಕರ್ಣಿಯವರು ಕುದುರೆಗಾಡಿ ಮಾಡಿಕೊಂಡು ದತ್ತಾತ್ರೇಯ ಗುಡಿಗೆ ಹೋದರು.

ದೇವರಿಗೆ ನಮಸ್ಕಾರ ಮಾಡಿ ಹೊರಗೆ ಬಂದಾಗ ಕುದುರೆಗಾಡಿ ಇರಲಿಲ್ಲ. `ಮತ್ತೊಂದು ಗಾಡಿ ತೆಗೆದುಕೊಂಡು ಬರಲಾ' ಎಂದು ಕೇಳಿದಾಗ,  `ಬೇಡ ನಡೆದೇ ಮುಂದೆ ಹೋಗೋಣ. ಅಲ್ಲಿಯೇ ಟಾಂಗಾ (ಕುದುರೆಗಾಡಿ) ಸಿಗುತ್ತದೆ'  ಎಂದರು ಬೇಂದ್ರೆ. ಇಬ್ಬರೂ ನಡೆದು ಕೆ ಸಿ ಸಿ ಬ್ಯಾಂಕಿನ ಹತ್ತಿರ ಬಂದರು. ಅಲ್ಲೊಬ್ಬ ರಸ್ತೆಯ ಬದಿಯಲ್ಲಿ ಚಪ್ಪಲಿ ಹೊಲಿಯುತ್ತ ಕುಳಿತಿದ್ದ. ಇವರ ಚಪ್ಪಲಿಯ ಉಂಗುಷ್ಠ ಹರಿದದ್ದನ್ನು ನೋಡಿ, `ಅಜ್ಜಾವ್ರ, ಉಂಗುಷ್ಠ ಹಚ್ಚಿಕೊಡತೇನಿ ಕೊಡ್ರಿ' ಎಂದ.

`ಆತು ಹಚ್ಚಿಕೊಡು'  ಎಂದು ಅವನ ಕಡೆಗೆ ಹೋದರು. ತಮ್ಮ ಚಪ್ಪಲಿ ತೆಗೆದುಕೊಡುವಾಗ ಆ ರಿಪೇರಿ ಮಾಡುವವ ಹೇಳಿದ, `ಬಿಸಲಾಗ ಕಾಲು ಸುಡತಾವ, ಇದರ ಮೇಲೆ ಕಾಲು ಇಡ್ರಿ'  ಎಂದು ಮತ್ತೊಂದು ಚಪ್ಪಲಿಯನ್ನು ಅವರ ಕಾಲಿನ ಹತ್ತಿರ ಇಟ್ಟ. ಅವನ ಪ್ರೀತಿ ಕಂಡು ಬೇಂದ್ರೆಯವರಿಗೆ ಅಂತಃಕರಣ ತುಂಬಿ ಬಂತು.

`ಅಲ್ಲೋ ನನ್ನ ಕಾಲು ಸುಡೋದರ ಬಗ್ಗೆ ನಿನಗೆ ಕಾಳಜಿ ಅದ. ಆದರೆ ಸುಡೋ ಬಿಸಿಲೊಳಗ ನೀನು ಕೂತಿ. ನಿನ್ನ ಮೈ ಸುಡೋದರ ಬಗ್ಗೆ ಎಚ್ಚರ ಇಲ್ಲಾ'  ಎಂದು ತಮ್ಮ ಕೊಡೆಯನ್ನು ಬಿಚ್ಚಿ ಅವನ ತಲೆಯ ಮೇಲೆ ಹಿಡಿದು ನಿಂತರು. ಆತ ಇವರ ಚಪ್ಪಲಿ ರಿಪೇರಿ ಮಾಡುತ್ತಿದ್ದ. ಅದು ಮುಗಿದ ಮೇಲೆ,  `ಪಾಲೀಶ್ ಮಾಡಲೇನ್ರಿ?'  ಎಂದು ಕೇಳಿದ. ಇವರು `ಹೂಂ' ಎಂದು ಮಾತಿಗಿಳಿದು ಅವನ ಮನೆತನದ ಇತಿಹಾಸವನ್ನೆಲ್ಲ ತಿಳಿದರು.

ಎಷ್ಟು ಮಕ್ಕಳು ನಿನಗ?

ಎರಡು

ದಿನಕ್ಕ ಎಷ್ಟು ಹಣ ದುಡಿತೀ?

ಹತ್ತು ರೂಪಾಯಿ, ಒಮ್ಮಮ್ಮೆ ಹೆಚ್ಚು ಕಡಿಮೆ ಆಗತೈತಿ .
ಶೆರೆ ಕುಡಿತೀ ಏನು?

ಇಲ್ಲ, ಯಾವಾಗರೇ ಒಮ್ಮಮ್ಮೆ .

ಮನ್ಯಾಗ ಛತ್ರಿ (ಕೊಡೆ) ಅದ ಏನು?

ಇದೇರಿ

ಇಷ್ಟು ಮಾತು ಆಗುವುದರೊಳಗೆ ಚಪ್ಪಲಿ ರಿಪೇರಿ ಕೆಲಸ ಮುಗಿದಿತ್ತು. ` ಎಷ್ಟು ಆತು?'  ಬೇಂದ್ರೆ ಕೇಳಿದರು.

ಆತ ಕ್ಷಣ ವಿಚಾರ ಮಾಡಿ,  `ಒಂದೂವರೆ ರೂಪಾಯಿ ಆತ್ರಿ'  ಎಂದ. ಇವರು ಹತ್ತು ರೂಪಾಯಿ ತೆಗೆದು ಕೊಟ್ಟರು. ಆತ  `ನನ್ನ ಕಡೆಗೆ ಚಿಲ್ರೆ ಇಲ್ಲರಿ' ಎಂದಾಗ ಬೇಂದ್ರೆ,  `ನೀನು ದಿನಕ್ಕೆ ಹತ್ತು ರೂಪಾಯಿ ದುಡೀತಿ. ಇದು ಇವತ್ತಿನ ಗಳಿಕೆ. ಮೊದಲು ಮನೆಗೆ ಹೋಗಿ ಕೊಡೆ ತೊಗೊಂಡು ಬಾ. ನೆರಳು ಮಾಡಿಕೊಂಡು ದುಡಿ. ನಿನ್ನ ಹಿಂದ ಹೆಂಡತಿ ಮಕ್ಕಳು ಅವಲಂಬಿಸಿದ್ದಾರೆ ಎಂಬುದನ್ನು ಮರೀಬ್ಯಾಡ. ಅವರಿಗೆ ಹಣ್ಣು ಹಂಪಲು ಒಯ್ಯಿ, ಕುಡೀಬ್ಯಾಡಾ'  ಎಂದರು. ಅವರ ಅಂತಃಕರಣದ ಮಾತಿಗೆ, ನೀಡಿದ ಹಣಕ್ಕೆ ಅವನ ಕಣ್ಣು ಒದ್ದೆಯಾದವು.

ಆತ ಕೇಳಿದ,  `ಅಜ್ಜಾವ್ರ, ನಿಮ್ಮ ಮನೆ ಎಲ್ಲಿ ಐತಿ?'. `ಸಾಧನಕೇರಿಯೊಳಗ' ಎಂದರು ಬೇಂದ್ರೆ.. `ಬೇಂದ್ರೆಯವರ ಮನೀ ಹತ್ತಿರ ಏನ್ರಿ?' ಎಂದು ಕೇಳಿದ.

ಇವರು  `ಹೂಂ'  ಎನ್ನುತ್ತ ಟಾಂಗಾ ನಿಲ್ದಾಣದ ಕಡೆಗೆ ನಡೆದರು. ಅನಂತರ ಆ ಚಪ್ಪಲಿ ರಿಪೇರಿ ಮಾಡುವವ ಆಗಾಗ ಬೇಂದ್ರೆಯವರ ಮನೆಗೆ ಬಂದು ಹೋಗುತ್ತಿದ್ದನಂತೆ.

ನಿಜವಾಗಿಯೂ ಎತ್ತರಕ್ಕೇರಿದವರು ಯಾವ ಹಂತಕ್ಕಾದರೂ ಇಳಿದು ಹೃದಯವಂತಿಕೆಯನ್ನು ತೋರಬಲ್ಲರು.
---------------------------------------------------------------------
ಇದನ್ನು  ಸುರೇಶ ಕುಲಕರ್ಣಿಯವರು ತಮ್ಮ  `ಬೇಂದ್ರೆ ಬೆಳಕು' ಕೃತಿಯಲ್ಲಿ ಬರೆದಿದ್ದಾರೆ.  ಇದರ ಬೆಳಕು ನಮಗೆ ಕಂಡಿದ್ದು ಡಾ. ಗುರುರಾಜ ಕರ್ಜಗಿ ಅವರ ಪ್ರಜಾವಾಣಿಯ ‘ಕರುಣಾಳು ಬಾ ಬೆಳಕೆ’ ಅಂಕಣದಲ್ಲಿ.

ಬೇಂದ್ರೆ ಅಜ್ಜನಿಗೆ, ಇದನ್ನು ನಮಗೆ ಉಣಬಡಿಸಿದ ಸುರೇಶ್ ಕುಲಕರ್ಣಿ ಮತ್ತು ಡಾ. ಗುರುರಾಜ ಕರ್ಜಗಿ ಅವರಿಗೆ ನಮಿಸೋಣ.

Tuesday, November 4, 2008

ಕನ್ನಡದ ಹರಕೆ

ನವಂಬರ್ ತಿಂಗಳು ಪೂರ
ಎಲ್ಲೆಲ್ಲು ಕನ್ನಡದ ಹರಕೆ
ಉಳಿದ ತಿಂಗಳು ಬರಿ
ಗೊರಕೆ ...ಗೊರಕೆ...

Tuesday, October 28, 2008

ಪೂರ್ಣ - ಬಿಂದು

ಅಂದು ನಾ ಹೂವು ಕೊಟ್ಟು
I Love U ಅಂದದಕ್ಕೆ
OK ಅಂದಳು ನನ್ನ ಬಿಂದು

ಇಂದು ಕೈಯಲ್ಲಿ ಕಾಸಿಲ್ಲದ್ದಕ್ಕೆ
ನನ್ನ ಪ್ರೀತಿಗೆ ಟಾಟಾ ಎಂದಳು
ಉಳಿದದ್ದು ಕೊನೆಯಲ್ಲಿ ಒಂದು ಪೂರ್ಣ - ಬಿಂದು

Saturday, June 7, 2008

ಮಾತಿಗಿಂತ ಕೃತಿ ದೊಡ್ಡದು - ವಿಶ್ವ ಪರಿಸರ ದಿನಾಚರಣೆ ೨೦೦೮




ಕೇವಲ ಪತ್ರಿಕೆಗಲ್ಲಿ, ಟೀ.ವಿ ಮಾಧ್ಯಮಗಳಲ್ಲಿ ಜಾಹಿರಾತು ಕೊಟ್ಟು ನಾಲ್ಕು ಮಾತನಾಡಿದ ಮಟ್ಟಿಗೆ ಎಲ್ಲವೂ ಸಾದಿಸಿದಂತೆ ಎಂದು ತಿಳಿದರೆ ತಪ್ಪಾಗುತ್ತದೆ.
ನಮ್ಮ ಐಗನ್ ಕಂಪನಿಯಲ್ಲಿ ಇದಲ್ಲದಕ್ಕಿಂಥ ಬಿನ್ನವಾಗಿ ಆಚರಿಸಲಾಯಿತು. ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ೨೦೦೮ ಆಚರಿಸುವ
ಮೂಲಕ ನಾವು ಎಲ್ಲರಿಗಿಂತ ಭಿನ್ನ ಎಂಬುದನ್ನು ತೋರಿಸಿದೆವು.

ಈ ಸಂಧರ್ಭದಲ್ಲಿ ಮಾನವ ಸಂಪನ್ಮೂಲ ಅಧಿಕಾರಿಗಳಾದ ಶ್ರೀ. ಚಿದಾನಂದ ಎಲ್. ಆರ್ ಅವರು ಆ ದಿನದ ವಿಶೇಷತೆಯ ಬಗ್ಗೆ ಮಾತನಾಡಿದರು ಹಾಗು ಗಿಡಗಳನ್ನು ನೆಡಲಾಯಿತು.

ಕೃಪೆ:
ಐಗನ್ ,
ಕೆ ಡಿ ಡಿ ಎಲ್ ಲಿಮಿಟೆಡ್,
ಬೆಂಗಳೂರು

Saturday, May 17, 2008

ಕಗ್ಗತ್ತಲೆಯ ಗೂಡಿನವರು ನಾವು!!

ಕಗ್ಗತ್ತಲೆಯ ಗೂಡಿನವರು ನಾವು,
ಸೂರ್ಯನಿದ್ದರು ಬೆಳಕ ಕಾಣದೆ,
ಕತ್ತಲೆಯ ಹಾದಿ ಇಡಿದವರು ನಾವು
ಕಗ್ಗತ್ತಲೆಯ ಗೂಡಿನವರು ನಾವು!!

ಇರುವ ಆರಡಿ ಮೂರಡಿ ಜಾಗದಲ್ಲೇ,
ಬಂಗಲೆಯ ಸವಿಗನಸ ಕಂಡು,
ನೋವಿನ ಛಾವಣಿ ಒದ್ದವರು ನಾವು,
ಕಗ್ಗತ್ತಲೆಯ ಗೂಡಿನವರು ನಾವು!!

ಅಶನ - ವ್ಯಶನ ಯಾವುದೇ ಇರಲಿ,
ಮದುವೆ - ಮುಂಜಿ ಏನೆ ಬರಲಿ,
ಇದ್ದಲ್ಲೆ ಮಮತೆಯ ನೂವುಂಡವರು ನಾವು,
ಕಗ್ಗತ್ತಲೆಯ ಗೂಡಿನವರು ನಾವು!!

ರೊಚ್ಚು ಕೆಸರೆ ಹರಿಯುತಿರಲಿ,
ಕೊಳೆತ ಮಾಂಸವೇ ನಾರುತಿರಲಿ,
ಇದ್ದಲ್ಲೆ ಮೃಷ್ಟಾನ್ನವ ಸವಿದವರು ನಾವು,
ಕಗ್ಗತ್ತಲೆಯ ಗೂಡಿನವರು ನಾವು!!

ಹೊಟ್ಟೆ ಬಟ್ಟೆಗೆ ಹಸಿವ ಕಟ್ಟಿ,
ಬಾಳ ಬಂಡಿಗೆ ಒಲವ ನೊಗವ ಕಟ್ಟಿ,
ಬಡತನದ ಹಾದಿಯಲ್ಲಿ ಸಾಗಿದವರು ನಾವು,
ಕಗ್ಗತ್ತಲೆಯ ಗೂಡಿನವರು ನಾವು!!

(ನಾನು ಜುಲೈ ೨೦೦೨ ರಲ್ಲಿ ಎಂ. ಎಸ್. ಡಬ್ಲ್ಯು ಮಾಡುವಾಗ
ಶೈಕ್ಷಣಿಕ ಅದ್ಯಯನಕ್ಕಾಗಿ ಬೆಂಗಳೂರಿನ ಒಂದು ಕೊಳಗೆರಿಗೆ ಬೇಟಿ
ಇಟ್ಟಾಗ ನನ್ನ ಕಣ್ಮುಂದೆ ಬಂದ ಒಂದು ರೋಮಾಂಚಕಾರಿ ಅನುಭೂತಿ)

ಪ್ರೀತಿಯ ಋಜು

ಕರಿ ಮೋಡ ಕರಗಿ ನೀರಾಗಿ ಭುವಿಗೆ ತಂಪನೆರವಾಗ,
ಎನ್ನೆದೆಯ ಪ್ರೀತಿ ಗರಿಗೆದರಿ ಕಾಡಿತ್ತು ನಿನ್ನ ಮೋಡಿ !!

ಹುಚ್ಚು ಮನಸಿನ ಚಿಪ್ಪಿನೊಳಗೆ ಬಚ್ಚಿಟ್ಟು ನನ್ನೋಲವು,
ಕಾಡಿತ್ತು ಕಣ್ಣಾಲೆಯ ಅಂಚಿನಲ್ಲಿ ಕಣ್ಣೀರ ಹನಿಯಾಗಿ!!

ಹೃದಯಾಳದ ಗರ್ಭದೊಳಗೆ ವಿರಹದ ನಾಡಿಮೀಟಿ,
ಕಾಡುತ್ತಿತ್ತು ಒಲುಮೆಯಲ್ಲಿ ನೀನೋತ್ತಿದ ಪ್ರೀತಿಯ ಋಜು!!